ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರ ದಾಳಿಯಿಂದ ಸ್ವಲ್ಪದರಲ್ಲೇ ಕಿರುತೆರೆಯ ಖ್ಯಾತ ಜೋಡಿ ಶೋಯೆಬ್ ಇಬ್ರಾಹಿಂ ಮತ್ತು ದೀಪಿಕಾ ಕಕ್ಕರ್ ಸೇಫ್ ಆಗಿದ್ದಾರೆ. ಈ ಘಟನೆಯ ಕುರಿತು ಶೋಯೆಬ್ ಪ್ರತಿಕ್ರಿಯಿಸಿ, ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ಪ್ರವಾಸಕ್ಕೆಂದು ಪಹಲ್ಲಾಮ್‌ಗೆ ಮಗ ಹಾಗೂ ಪತ್ನಿ ದೀಪಿಕಾ ಜೊತೆ ಶೋಯೆಬ್ ಬಂದಿದ್ದರು. ಏ.22ರಂದು ನಡೆದ ಉಗ್ರ ದಾಳಿಗೂ ಕೆಲವು ಗಂಟೆಗಳ ಮುನ್ನ ಪಹಲ್ಲಾಮ್ ತೊರೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.



0 Comments