ಉಗ್ರರ ದಾಳಿಯಿಂದ ಸ್ವಲ್ಪದರಲ್ಲೇ ಕಿರುತೆರೆ ದಂಪತಿ ಪಾರು



ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಉಗ್ರರ ದಾಳಿಯಿಂದ ಸ್ವಲ್ಪದರಲ್ಲೇ ಕಿರುತೆರೆಯ ಖ್ಯಾತ ಜೋಡಿ ಶೋಯೆಬ್ ಇಬ್ರಾಹಿಂ ಮತ್ತು ದೀಪಿಕಾ ಕಕ್ಕರ್ ಸೇಫ್ ಆಗಿದ್ದಾರೆ. ಈ ಘಟನೆಯ ಕುರಿತು ಶೋಯೆಬ್ ಪ್ರತಿಕ್ರಿಯಿಸಿ, ನಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ಪ್ರವಾಸಕ್ಕೆಂದು ಪಹಲ್ಲಾಮ್‌ಗೆ ಮಗ ಹಾಗೂ ಪತ್ನಿ ದೀಪಿಕಾ ಜೊತೆ ಶೋಯೆಬ್ ಬಂದಿದ್ದರು. ಏ.22ರಂದು ನಡೆದ ಉಗ್ರ ದಾಳಿಗೂ ಕೆಲವು ಗಂಟೆಗಳ ಮುನ್ನ ಪಹಲ್ಲಾಮ್ ತೊರೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.



إرسال تعليق

0 تعليقات