APJ ಅಬ್ದುಲ್ ಕಲಾಂ ಜೀವನ ಚರಿತ್ರೆಯಲ್ಲಿ ನಟ ಧನುಷ್ ನಟಿಸಲಿದ್ದಾರೆ. ಇದರ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಧನುಷ್ ಎಪಿಜೆ ಅಬ್ದುಲ್ ಕಲಾಂ ಪಾತ್ರವನ್ನು ಮಾಡಲಿದ್ದಾರೆ. ಅವರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ತರಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರಕ್ಕೆ 'ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಟೈಟಲ್ ಇಡಲಾಗಿದೆ. ಡೈರೆಕ್ಟರ್ ಓಂ ರಾವುತ್ ನಿರ್ದೇಶನ ಮಾಡಲಿದ್ದಾರೆ. ಇಳಯರಾಜ ಬಯೋಪಿಕ್ ಸೇರಿ ಹಲವು ಸಿನಿಮಾಗಳು ಧನುಷ್ ಕೈಯಲ್ಲಿವೆ.
0 تعليقات